ರಾಣೆಬೆನ್ನೂರ- ತಾಲೂಕು ಆಡಳಿತ, ತಾಲೂಕು ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ವತಿಯಿಂದ ಅ.17 ರಂದು ಇಲ್ಲಿನ ತಾಲೂಕು ಪಂಚಾಯತ ಸಭಾ ಭವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುವುದು ಎಂದು ಸಮಾಜದ ತಾಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಅಂದು ಬೆಳಿಗ್ಗೆ ನಗರದ ತಳವಾರ ಗಲ್ಲಿಯ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಬಾಜಾ ಭಜಂತ್ರಿ, ಡೊಳ್ಳು ಹಾಗೂ ವಾದ್ಯಮೇಳದ ಮೂಲಕ ಪ್ರಾರಂಭವಾಗಿ ಎಂಜಿ ರಸ್ತೆ ಮೂಲಕ ತಾಪಂ ಆವರಣ ತಲುಪಿಲಿದೆ.
ನಂತರ ತಾಲೂಕ ಪಂಚಾಯತ ಸಭಾಭವನದಲ್ಲಿ ನಡೆಯುವ ಜಯಂತಿ ಕಾರ್ಯಕ್ರಮವನ್ನು ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟನೆ ಮಾಡಲಿದ್ದು, ತಹಸೀಲ್ದಾರ ಆರ್.ಎಚ್. ಭಾಗವಾನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇದರ ಜತೆಗೆ ವಾಲ್ಮೀಕಿ ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ನೌಕರರಿಗೆ, ಕ್ರೀಡಾ ಪ್ರತಿಭೆಗಳಿಗೆ ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದರು.
ಕಾರ್ಯಕ್ರಮಕ್ಕೆ ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರು, ಯುವಕರು ಹಾಗೂ ನೌಕರರ ವರ್ಗದ ಜನರು ಭಾಗಿಯಾಗಬೇಕು ಎಂದು ಚಂದ್ರಣ್ಣ ಬೇಡರ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಚಂದ್ರಪ್ಪ ಬೇಡರ, ಶಶಿಧರ ಬಸೇನಾಯ್ಕರ, ರವಿಂದ್ರಗೌಡ ಪಾಟೀಲ, ರಾಜೇಂದ್ರ ಬಸೇನಾಯ್ಕರ, ಭೀಮಣ್ಣ ಎಡಚಿ, ಸುಭಾಸ ಬನ್ನಿಕೋಡ, ನಾಗೇಶ ತಳವಾರ, ರಾಯಣ್ಣ ಮಾಗನೂರು, ಕರಬಸಪ್ಪ ಕೂಲೇರ, ಹನುಮಂತ ಮೀನಕಟ್ಟಿ, ರಾಜು ಮಾದಮ್ಮನವರ, ಗಣೇಶ ದೇವರಮನಿ, ಮಂಜುನಾಥ ಓಲೇಕಾರ ಹಾಜರಿದ್ದರು

More Stories
16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…
ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.
ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.