ರಾಣೆಬೇನ್ನೂರು: ಮಾಜಿ ಸಚಿವ ಆರ್.ಶಂಕರ್ ಅಧಿಕೃತವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕಳೆದ ಮೂರು ವರ್ಷದಲ್ಲಿ ಬಿಜೆಪಿ, ಎನ್.ಸಿ.ಪಿ ಪಕ್ಷಕ್ಕೆ ಸೇರ್ಪಡೆಯಾಗಿ ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಿದ್ದಾರೆ.
ಅಲ್ಲದೆ ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿರುವ ಗಡ್ಡದೇವರಮಠ ಪರವಾಗಿ ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪರ ಕ್ಯಾಂಪೇನ್ ಮಾಡಲು ಸಿದ್ದರಾಗಿರುವುದು ವಿಶೇಷ.
ಪ್ರಕಾಶ-ಶಂಕರ ಜೋಡೆತ್ತು…
ರಾಣೆಬೇನ್ನೂರು ವಿಧಾನಸಭಾ ಕ್ಷೇತ್ರದ ರಾಜಕೀಯದಲ್ಲಿ ಹಾವು-ಮುಂಗಸಿ ತರ ಕಾದಾಟ ನಡೆಸಿದ್ದ ಆರ್.ಶಂಕರ್ ಹಾಗೂ ಕೆ.ಬಿ.ಕೋಳಿವಾಡರ ಕುಟುಂಬ ಇದೀಗ ಹೊಂದಾಣಿಕೆ ಮೂಲಕ ಕ್ಷೇತ್ರದಲ್ಲಿ ರಾಜಕೀಯಕ್ಕೆ ಹೊಸ ನಾಂದಿ ಹಾಡಲಾಗಿದೆ. ಈಗ ಕೋಳಿವಾಡರ ಮಗ ಪ್ರಕಾಶ ಶಾಸಕರಾಗಿರುವ ಹಿನ್ನಲೆ ಆರ್.ಶಂಕರ್ ಜತೆ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಜೋಡೆತ್ತು ಆಗುತ್ತಾರೆ ಎಂಬುದು ಜನರ ನಿರೀಕ್ಷೆ.
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”