ರಾಣೆಬೇನ್ನೂರು: ಜಮೀನಿನಲ್ಲಿ ಪಂಪಸೆಟ್ ದುರಸ್ತಿ ಮಾಡಲು ಹೋದಾಗ ವಿದ್ಯುತ್ ತಗುಲಿ ಅಪ್ಪ-ಮಗ ಸಾವನ್ನಪ್ಪಿದ ಘಟನೆ ರಾಣೆಬೇನ್ನೂರು ತಾಲೂಕಿನ ಪತ್ತೇಪುರ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಗ್ರಾಮದ ರೈತನಾದ ಕರಬಸಪ್ಪ ಕಡೇನಾಯಕನಹಳ್ಳಿ(50) ಹಾಗೂ ಅವರ ಮಗ ದರ್ಶನ ಕಡೇನಾಯಕನಹಳ್ಳಿ(26) ಮೃತಪಟ್ಟ ದುರ್ದೈವಿಗಳು.
ಇವರು ಗ್ರಾಮದ ಹೊರಭಾಗದಲ್ಲಿದ್ದ ಜಮೀನಿನಲ್ಲಿ ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ ಸ್ಟಾರ್ಟ್ ಮಾಡಲು ಹೋಗಿದ್ದಾರೆ. ಈ ಸಮಯದಲ್ಲಿ ವಿದ್ಯುತ್ ಆಕಸ್ಮಿಕವಾಗಿ ತಗುಲಿ ಅಪ್ಪ-ಮಗ ಸಾವನ್ನಪ್ಪಿದ್ದಾರೆ.
ಹಲಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ