16 ಲಕ್ಷ ಮೌಲ್ಯದ ಬಂಗಾರ ಮಾರಾಟ ಮಾಡಲು ಯತ್ನಿಸಿದ ಮಹಿಳೆ ಬಂಧನ…

ಹಾವೇರಿ ಜಿಲ್ಲಾಸತ್ರ ಕೋರ್ಟ್‌ಗೆ ಬಾಂಬ್ ಬೆದರಿಕೆ ಪತ್ರ; ಕೋರ್ಟನಿಂದ ಓಡಿ ಬಂದ ಕಕ್ಷಿದಾರರು, ವಕೀಲರು.

ಸಿಎಂ ಕುರ್ಚಿ ಗುದ್ದಾಟದ ವಿಚಾರ…! ಮತ್ತೆ ಗರಂ ಆದ ಸಿಎಂ ಸಿದ್ಧರಾಮಯ್ಯ.

ಸಾಯಿ ಆಸ್ಪತ್ರೆ ವೈದ್ಯನ ಮೇಲೆ ಹಲ್ಲೆ: 8 ಜನರ ವಿರುದ್ಧ ಪ್ರಕರಣ ದಾಖಲು.

ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ನಿಂಗರಾಜ ಕೋಡಿಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದು ಚಿಕ್ಕಬಿದರಿ ನೇಮಕ.

ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ವರ್ಗಾವಣೆ ಮಾಡಿಕೊಡಲು ಲಂಚ ಸ್ವೀಕಾರ, ರಾಣೆಬೆನ್ನೂರ ತಹಶೀಲ್ದಾರ ಕಛೇರಿಯ ಆಹಾರ ನಿರೀಕ್ಷಕ ಬಂಧನ.

ಉಚಿತ ಚಿಕನ್ ಬಿರಿಯಾನಿ ಬೇಕಾ,‌ ಆಗಾದ್ರೆ ಬಸ್ ನಿಲ್ದಾಣಕ್ಕೆ ಬನ್ನಿ.

ಅಂಬೇಡ್ಕರ್, ಗಾಂಧಿ ಹೆಸರು ಅಳಿಸಲು ಹೊರಟಿರುವ ವಿರುದ್ಧ ನನ್ನ ಹೋರಾಟ; ಸಚಿವ ಸತೀಶ ಜಾರಕಿಹೊಳಿ

ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಜಿಲ್ಲಾಧಿಕಾರಿ.

ತವರ ಮನೆಗೆ ಹೆಂಡತಿ ಹೋದಾಗ ಎರಡನೇ ಮದುವೆಯಾದ ಭೂಪ ಜೈಲು ಪಾಲು…!

ದಾರಿ ತಪ್ಪಿ ಬಂದಿದಲ್ಲ, ದಾರಿ ಹುಡಕಿಕೊಂಡು ಬಂದೇನಿ; ಗಜರಾಜನ ಕೂಗಾಟ

ತಾಯಿ ಮೇಲೆ ಹಲ್ಲೆ ಮಾಡಿದ್ರೆ ಹುಷಾರ…! ಪುತ್ರ, ಸೊಸೆಗೆ ಜೈಲು ಪಾಲು

ನಿರ್ಮಾಣ ಹಂತದ ಟ್ಯಾಂಕನಿದ್ದು ಬಿದ್ದು ಕಾರ್ಮಿಕ ಸಾವು.

ಒಂಟಿ ಮನೆಯಲ್ಲಿದ್ದ ಮಹಿಳೆಯ ಕತ್ತು ಕೊಯ್ದು ಕೊಲೆ‌ಮಾಡಿದ ವ್ಯಕ್ತಿ ಬಂಧನ

ರಾಣೆಬೇನ್ನೂರ ನಗರದಲ್ಲಿ ಮಹಿಳೆಯ ಭೀಕರ ಕೊಲೆ, ಕಾರಣ ನಿಗೂಢ…!

ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವ ರೈತ ಸಾವು

ಸಿಎಂ ಬದಲಾವಣೆ ವಿಚಾರ ಹೈಕಮಾಂಡಗೆ ಬಿಟ್ಟ ವಿಚಾರ; ಕೆ.ಬಿ.ಕೋಳಿವಾಡ.

ಕಾಂಗ್ರೆಸ್ ಪಕ್ಷ ಹಿಂದುಳಿದ, ದಲಿತರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಲ್ಲಾ ಸ್ಥಾನಮಾನ ನೀಡಿದೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ.

ಡಿಕೆಶಿ ಭೇಟಿ ಮಾಡಿದ ಹಾವೇರಿ ಜಿಲ್ಲೆಯ ಮೂವರು ಶಾಸಕರು.

ಸ್ಪೆಷಲ್ ತರಗತಿ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ,ಮಾಸ್ತರ ಎಸ್ಕೇಪ್..!

ಕುರುಬ ಸಮಾಜವನ್ನು ಬಿಜೆಪಿ ಯಾಕೆ ವಿರೋಧ ಮಾಡುತ್ತದೆ, ಸಿದ್ದರಾಮಯ್ಯ ಜಾತ್ಯಾತೀತ; ನಾಯಕ ಮಾಜಿ ಸಚಿವ ಆರ್.ಶಂಕರ್

 

ರಾಣೆಬೇನ್ನೂರು: ರಾಜ್ಯದಲ್ಲಿ ಕುರುಬ ಸಮಾಜವನ್ನು ಹಾಗೂ ಹಿಂದುಳಿದ ಮುಖ್ಯಮಂತ್ರಿಯಾಗಿ ರಾಜ್ಯದ ಜಾತ್ಯಾತೀತ ನಾಯಕರಾಗಿ ಬೆಳೆದಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಕುತಂತ್ರದಿಂದ ಕೆಳಗಿಳಿಸಲು ಬಿಜೆಪಿ ಮುಖಂಡರು ಹಾಗೂ ಜೆಡಿಎಸ್ ಷಡ್ಯಂತರದ ವಿರುದ್ಧ ರಾಜ್ಯಾದ್ಯಂತ ಕುರುಬ ಸಮಾಜ ಸೇರಿ ಇತರ ವರ್ಗದವರೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಮಾಜಿ ಸಚಿವ ಆರ್ ಶಂಕರ್ ಎಚ್ಚರಿಸಿದರು.

ಗುರುವಾರದಂದು ಸ್ಥಳೀಯ ಕುರಿ ಉಣ್ಣೆ ಸೊಸೈಟಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿಲ್ಲ. ಅವರ ಪತ್ನಿ ಪಾರ್ವತಿ ಹೆಸರಿನಲ್ಲಿ ಕಾನೂನು ರೀತಿಯ ನೋಟಿಫಿಕೇಶನ್ ಮೂಲಕ ಬದಲಿ ನಿವೇಶನಕ್ಕೆ ಸೈಟ್ ವಿತರಣೆಯಾಗಿದೆ. ಅದು ಬಿಜೆಪಿ ಸರ್ಕಾರದ 50 : 50 ಅನುಪಾತದಂತೆಯೇ ಆಗಿದೆ.

ಇದನ್ನೇ ತಿರುಚಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರ ಮಾಡುತ್ತಾ ಸರ್ಕಾರದ ಮೇಲೆ ಗೂಭೆ ಕೂರಿಸಲು ಮುಂದಾಗಿರುವುದು ವಿಷಾದನೀಯ ಎಂದರು.

ಮುಖ್ಯಮಂತ್ರಿ ಆಗಿ ಪ್ರಾಮಾಣಿಕವಾಗಿ ಉತ್ತಮ ಕೆಲಸ ಮಾಡುತ್ತಿದ್ದು ,ಇದನ್ನು ಸಹಿಸದೆ ಅವರ ಮೇಲೆ ಹುನ್ನಾರ ಮಾಡುವ ದೃಷ್ಟಿಯಿಂದ ಬೇರೆಯವರ ಹಗರಣಗಳನ್ನು ಅವರ ಮೇಲೆ ಗೂಭೆ  ಕೂರಿಸುವ ಷಡ್ಯಂತರ ನಡೆಯುತ್ತಿದೆ ಎಂದು ಆಪಾದಿಸಿದರು.

 

ಆಡಳಿತ ಮತ್ತು ವಿರೋಧ ಪಕ್ಷದ ಬಗ್ಗೆ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಜೆಡಿಎಸ್ ವಿರುದ್ಧ ಜನರು ಆಕ್ರೋಶಗೊಂಡಿದ್ದು , ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಮಾಡುತ್ತಿರುವ ವ್ಯವಸ್ಥಿತ ಹುನ್ನಾರ ಇದಾಗಿದೆ . ಇಂತಹ ಷಡ್ಯಂತ್ರಕ್ಕೆ ತಿರುಗೇಟು ನೀಡಲು ಸರ್ವ ಸಮಾಜದವರೊಂದಿಗೆ ರಾಜ್ಯದ್ಯಂತ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಿದೆ  ಎಂದು ಶಂಕರ್ ಹೇಳಿದರು.

 

ಕುರುಬ ಸಮಾಜದ ರಾಜ್ಯ ಸದಸ್ಯ ಹಾಗೂ ಯುವ ನ್ಯಾಯವಾದಿ ಮೃತ್ಯುಂಜಯ ಗುದಗೇರ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೇಲಿನ ಆಪಾದನೆಗಳ ಬಗ್ಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂಡಾ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವುದು ಇಡೀ ದೇಶದಲ್ಲಿ ಪ್ರಥಮವಾಗಿದೆ.

 

ಬಿಜೆಪಿ ಮತ್ತು ಜೆಡಿಎಸ್ ನವರು ಉದ್ದೇಶಪೂರ್ವಕವಾಗಿ ಅವರ ಮೇಲೆ ಇಲ್ಲಸಲ್ಲದ ಆರೋಪಹರಿಸುತ್ತಿದ್ದು, ಮೈತ್ರಿ ಪಕ್ಷಗಳಿಗೆ ತಪ್ಪಾಗಿ ಕಂಡು ಬಂದರೆ ಕಾನೂನು ಹೋರಾಟ ಮಾಡಲಿ ಅದಕ್ಕೆ ತಮ್ಮ ಅಭ್ಯಂತರವಿಲ್ಲ . ಅನಾವಶ್ಯಕವಾಗಿ ಈ ರೀತಿ ಮಾಡಿದರೆ, ಇದು ಹೀಗೆಯೇ ಮುಂದುವರೆದರೆ ರಾಜ್ಯಾದ್ಯಂತ ಕುರುಬ ಸಮಾಜದಿಂದ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.

ಕುರುಬ ಸಮಾಜದ ತಾಲೂಕ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಶಿವಪ್ಪ ಮಣೇಗಾರ್ , ಆನಂದ ಹುಲಬನ್ನಿ, ಮೂರ್ತೆಪ್ಪ ಕಂಬಳಿ ,  ಸಿದ್ದಪ್ಪ ದೇವರಗುಡ್ಡ, ರವಿರಾಜ್ ಹುಲಗಮ್ಮನವರ್, ಪರ್ಸಪ್ಪ ಹುಲ್ಲತ್ತಿ, ಸಿದ್ದಪ್ಪ ಭಾಗಲವರ್  ಸೇರಿದಂತೆ ಮತ್ತಿತರರು ಇದ್ದರು

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿ : 80952 03132
error: Content is protected !!