ರಾಣೇಬೆನ್ನೂರ ತಾಲೂಕಿನ ವೆಂಕಟಾಪುರ(ಕಾಕೋಳ ತಾಂಡ) ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಗ್ರಾಮದ ಮಲ್ಲೇಶ ಟೋಪೆಪ್ಪ ಲಮಾಣಿ (42) ಆತ್ಮಹತ್ಯೆ ಮಾಡಿಕೊಂಡ ರೈತ.
ಮೃತ ರೈತನು ತಮ್ಮ ತಂದೆಯವರ ಹೆಸರಿನಲ್ಲಿದ್ದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕೃಷಿ ಚಟುವಟಿಕೆಗಾಗಿ ಸಾಕಷ್ಟು ಸಾಲವನ್ನು ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಕಾಕೋಳ ಕೆ. ವಿ. ಜಿ. ಬಿ ಬ್ಯಾಕ್ ನಲ್ಲಿ 2ಲಕ್ಷ, ವಿವಿಧ ಸಘಗಳಲ್ಲಿ 2ಲಕ್ಷ ಸೇರಿದಂತೆ ಇತರೆ ಕಡೆ ಎರಡು ಲಕ್ಷ ಸಾಲ ಮಾಡಿರುತ್ತಾರೆ.
ಮೃತರಿಗೆ ಇಬ್ಬರು ಹೆಂಡತಿಯರಿದ್ದು 4 ಜನ ಹೆಣ್ಣು ಮಕ್ಕಳು ಒರ್ವ ಮಗ ಸೇರಿದಂತೆ ತಂದೆ ತಾಯಿ ಹಾಗೂ ಒಬ್ಬ ಸಹೋದರ ಇರುತ್ತಾನೆ.
ಈ ಕುರಿತು ರಾಣೇಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….
More Stories
ತಾಪಂ ಸಾಮಾನ್ಯ ಸಭೆಗೆ ತಹಸೀಲ್ದಾರ ಗೈರು, ನೋಟಿಸ್ ನೀಡುವಂತೆ ಉಪಕಾರ್ಯದರ್ಶಿ ಸೂಚನೆ
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.