ಹಾವೇರಿ: ಮಾಜಿ ಸಚಿವ ಬಿ.ಸಿ.ಪಾಟೀಲ ಅಳಿಯ ಕೆ.ಜಿ.ಪ್ರತಾಪ್ ಕುಮಾರ್ (43) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದವರಾದ ಪ್ರತಾಪ್ ಕುಮಾರ, ಬಿ.ಸಿ.ಪಾಟೀಲ ಪುತ್ರಿ ಸೌಮ್ಯಾ ಪಾಟೀಲ ಅವರ ಪತಿ ಎಂದು ತಿಳಿದುಬಂದಿದೆ.
ಹೊನ್ನಾಳಿ ತಾಲ್ಲೂಕಿನ ಅರಕೆರೆಯ ಅರಣ್ಯ ಪ್ರದೇಶದಲ್ಲಿ ಪ್ರತಾಪ್ ಕುಮಾರ ವಿಷ ಸೇವನೆಯ ಸ್ಥಿತಿಯಲ್ಲಿ ಕಾರಿನಲ್ಲಿ ಪ್ರಜ್ಞಾಹೀನವಾಗಿ ಪತ್ತೆಯಾಗಿದ್ದು, ಅವರನ್ನು ಗಮನಿಸಿದ ಸಾರ್ವಜನಿಕರು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕರೆತಂದಿದ್ದು, ದಾರಿ ಮಧ್ಯದಲ್ಲಿಯೇ ಸಾವಿಗೀಡಾಗಿದ್ದಾರೆ. ವಿಷಯ ತಿಳಿದು ಬಿ.ಸಿ.ಪಾಟೀಲ ಶಿವಮೊಗ್ಗಕ್ಕೆ ಬಂದಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಪ್ರತಾಪಕುಮಾರ್ ಅವರು ಮಾವ ಬಿ.ಸಿ.ಪಾಟೀಲ ಅವರ ಊರು ಹಿರೇಕೆರೂರಿನಲ್ಲಿ ಗುತ್ತಿಗೆದಾರ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ವಾಸವಿದ್ದರು. ಪ್ರತಾಪಕುಮಾರ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ