ರಾಣೆಬೇನ್ನೂರು: ನಗರದ ನಗರಸಭೆ ಕಾರ್ಯಾಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಸರ್ಕಾರದ ಕೆಲಸದ ನಿಯಮಗಳ ಕುರಿತು ಚಾಟಿ ಬೀಸಿದ್ದಾರೆ.
ಹೌದು ಹಾವೇರಿ ಲೋಕಾಯುಕ್ತ ಅಧಿಕಾರಿಗಳಿಗೆ ನಗರಸಭೆ ಅಕ್ರಮ ಹಾಗೂ ಅಧಿಕಾರಿಗಳ ದುರ್ವರ್ತನೆ ಕುರಿತು ದೂರು ಪ್ರಕರಣ ದಾಖಲಾಗಿದ್ದವು. ಇದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ನಗರಸಭೆ ಕಾರ್ಯಾಲಯಕ್ಕೆ ದಿಢೀರ್ ಭೇಟಿ ನೀಡಿದ್ದಾರೆ. ಆದರೆ ಈ ಸಮಯದಲ್ಲಿ ಆರು ಹಿರಿಯ ಅಧಿಕಾರಿಗಳು ಕರ್ತವ್ಯ ಬಿಟ್ಟು ಹೊರಗಡೆ ಹೋಗಿದ್ದು ಕಂಡು ಬಂದಿದೆ. ಅಲ್ಲದೆ ಕೆಲ ಅಧಿಕಾರಿಗಳು ಸರ್ಕಾರ ನೀಡಿದ ತಮ್ಮ ಪದನಾಮದ ಗುರುತಿನ ಚೀಟಿ ಹಾಕದೆ ಇರುವುದಕ್ಕೆ ಅಧಿಕಾರಿಗಳು ಗರಂ ಆಗಿದ್ದಾರೆ.
ತಕ್ಷಣ ಲೋಕಾಯುಕ್ತ ಅಧಿಕಾರಿಗಳು ಸಿಬ್ಬಂದಿಗಳಿಗೆ ನಗರಸಭೆ ಮಾಹಿತಿ ಕೇಳಿದಾಗ ತೊದಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹಾಗೂ ಕಾಮಗಾರಿ ವಿಭಾಗದಲ್ಲಿ ಲಂಚದ ಆರೋಪ ಸಹ ಕೇಳಿ ಬಂದಿದ್ದ, ಅಲ್ಲಿನ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತದೆ ಎಂಬ ಮಾಹಿತಿ ಬಂದ ಹಿನ್ನೆಲೆ ಎಲ್ಲಾ ಪರಿಶೀಲನೆ ಮಾಡಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.
ಪರಿಶೀಲನೆ ಸಮಯದಲ್ಲಿ ಡಾ.ಬಿ.ಪಿ.ಚಂದ್ರಶೇಖರ ಡಿವೈಎಸ್ಪಿ, ಮುಸ್ತಾಕ ಅಹ್ಮದ್ ಸಿಪಿಐ, ಆಂಜನೇಯ ಎನ್.ಎಚ್. ಪಿಐ ಹಾಜರಿದ್ದರು.
More Stories
ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ
ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.