ರಾಣೆಬೇನ್ನೂರು: ನಗರದ APMC ಮಾರ್ಕೆಟನ ಗೊಡೌನ್ ನಲ್ಲಿ ಯಾವುದೇ ಕೃಷಿ ಇಲಾಖೆಯ ಪರವಾನಗಿ ಪಡೆಯದೆ ನಕಲಿ ಶೇಂಗಾ ಬೀಜ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ.
ಹೌದು ಎಪಿಎಂಸಿ ಆವರಣದಲ್ಲಿರುವ ಹಳೆಯ ತಗಡಿನ ಗೋದಾಮಿನಲ್ಲಿ ಪ್ರಕಾಶ್,ಸದಾಶಿವ ಹಾಗೂ ವಿನಾಯಕ ಎಂಬುವರು ರೈತರಿಗೆ ನಕಲಿ ಶೇಂಗಾ ಬೀಜ ಮಾರಾಟ ಮಾಡಿದ್ದಾರೆ. ಆದರೆ ರೈತರು ಬಿತ್ತನೆ ಮಾಡಿ ಹದಿನೈದು ದಿನ ಕಳೆದರು ಸಸಿ ಬಾರದ ಹಿನ್ನೆಲೆ ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣ ಬೀಜ ನೀಡಿದ ಗೋದಾಮಿನ ಹತ್ತಿರ ಬಂದಾಗ ಇದು ನಕಲಿ ಬೀಜಗಳು ಎಂಬುದು ಗೋತ್ತಾಗಿದೆ.
ನಂತರ ಸುಮಾರ ಮೂವತ್ತಕ್ಕೂ ಹೆಚ್ಚು ರೈತರ ಹಾಗೂ ಮಹಿಳೆಯರು ದಲ್ಲಾಳಿಗಳ ಗೊಡೌನ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಬೀಜ ನೀಡಿ ನಮಗ್ಯಾಕೆ ಮೋಸ ಮಾಡಿದಿರಾ ಎಂದು ಪ್ರಶ್ನಿಸಿದ ರೈತರಿಗೆ, ದಲ್ಲಾಳಿ ಸಿಟ್ಟಿಗೆದ್ದು ಬೇಕಾದರೆ ಎಣ್ಣಿ ಕುಡಿದು ಸಾಯಿರಿ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಪರಿಹಾರ ನೀಡುವಂತೆ ಆಗ್ರಹ ಮಾಡಿದರು.
ಸ್ಥಳಕ್ಕೆ ಕೃಷಿ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ನಕಲಿ ಬೀಜ ಮಾರಾಟ ಮಾಡುತ್ತಿದ್ದವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ
More Stories
ತುಂಗಭದ್ರಾ ನದಿಯಲ್ಲಿ 15 ಕಿ.ಮೀ. ಈಜಿ ಪ್ರಾಣ ಉಳಿಸಿಕೊಂಡ ಮೈಸೂರಿನ ವೃದ್ಧ…!
ಮೂರು ಬೈಕಗಳ ನಡುವೆ ಭೀಕರ ಅಪಘಾತ ಒರ್ವ ಯುವಕ ಸಾವು, ಮೂವರು ಗಂಭೀರ.
ಆಟೋ ಚಾಲಕರಿಗೆ ಸನ್ಮಾನ ಸಮಾರಂಭ ಮಾಡಲಿರುವ “ಪರಮೇಶಣ್ಣ ಗೂಳಣ್ಣನವರ”