ರಾಣೆಬೇನ್ನೂರು: ನಾನು ಸಿಬಿಐ ಮುಂಬೈಯಿಂದ ಮಾತನಾಡೋದು ಎಂದು ರಾಣೆಬೇನ್ನೂರು ನಗರದ ಪ್ರತಿಷ್ಠಿತ ಹಿರಿಯ ವೈದ್ಯರನ್ನು ಹೆದರಿಸಿ ಅವರ ಬ್ಯಾಂಕ್ ಖಾತೆಯಿಂದ ಸುಮಾರು ಮೂರುವರೆ ಕೋಟಿ ಹಣವನ್ನು ವರ್ಗಾವಣೆ ಮಾಡಿಕೊಂಡ ಘಟನೆ ನಡೆದಿದೆ.
ನಗರದ ಸಂಜೀವಿನಿ ನರ್ಸಿಂಗ್ ಹೋಂ ವೈದ್ಯರಾದ ಡಾ.ಭೀಮಸೇನ್ ಕರ್ಜಗಿ ಹಣ ಕಳೆದುಕೊಂಡ ವೈದ್ಯರಾಗಿದ್ದಾರೆ.
ಮೇ. 17 ರಂದು ಅನಾಮಧೇಯ ವ್ಯಕ್ತಿಯೋರ್ವ ಕರೆ ಮಾಡಿ ನಾನು ಮುಂಬೈಯಿಂದ ಸಿಬಿಐ ಆಫೀಸರ್ ದಿಕ್ಷೀತ್ ಗಡಾದ ಮಾತನಾಡೋದು. ನರೇಶ್ ಗೋಯಲ್ ಎಂಬ ಮುಂಬೈ ವ್ಯಕ್ತಿ ಬ್ಯಾಂಕ್ ಚಿಟಿಂಗ್ ಹಾಗೂ ಮನಿ ಲ್ಯಾಂಡ್ ಕಾಯ್ದೆ ಅಡಿ ಅವನ ಮೇಲೆ ಕೇಸ್ ದಾಖಲಾಗಿದೆ. ಅವನು ಮುಂಬೈನಲ್ಲಿ ಇರುವ ಕೆನಾರ ಬ್ಯಾಂಕಿನಲ್ಲಿ ಡಾ.ಭೀಮಸೇನ್ ಕರ್ಜಗಿ ಎಂಬುವರು ಖಾತೆಗೆ ಹಣ ಹಾಕಿ ಮತ್ತೆ ಡ್ರಾ ಮಾಡಿಕೊಂಡಿದ್ದಾನೆ. ನೀವು ಮುಂಬೈನಲ್ಲಿ ಬ್ಯಾಂಕ್ ಖಾತೆ ತೆರದಿರಾ ಎಂದು ಕೇಳಿದ್ದಾನೆ.
ಇದಕ್ಕೆ ಉತ್ತರಿಸಿದ ವೈದ್ಯರು ಯಾವುದೇ ಬ್ಯಾಂಕ್ ಖಾತೆ ತೆರದಿಲ್ಲ ಎಂದಾಗ ಮತ್ತೆ ಹೆದರಿಸಿ ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಕೋಡಿ ಪರಿಶೀಲನೆ ಮಾಡುವೆ ಎಂದು ಸುಮಾರು ಮೂರು ಕೋಟಿ ಎಪ್ಪತ್ತೊಂದು ಲಕ್ಷ ರೂ ವಂಚನೆ ಮಾಡಿದ್ದಾನೆ.
ಈ ಕುರಿತು ಹಾವೇರಿ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
More Stories
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.
ಗುಡಗೂರು ಗ್ರಾಮದಲ್ಲಿ ವೃದ್ಧನ ಮೇಲೆ ಹರಿದ ಖಾಸಗಿ ಶಾಲೆಯ ಬಸ್.
ಇಸ್ವತ್ತು ಉತಾರ ನೀಡಲು ಲಂಚ ಪಡೆಯುತ್ತಿದ್ದ ಪಿಡಿಓ, ಉಪಾಧ್ಯಕ್ಷ ಸೇರಿ ಮೂರ ಜನ ಗ್ರಾಪಂ ಸದಸ್ಯರ ಬಂಧನ.