ರಾಣೆಬೇನ್ನೂರು: ರಾಜ್ಯದಲ್ಲಿ ಇಂದು ಎಸ್ಸೇಸೆಲ್ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ರಾಣೆಬೇನ್ನೂರು ತಾಲೂಕು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ
ಮೊದಲ ಸ್ಥಾನವನ್ನು ಬ್ಯಾಡಗಿ ಎರಡನೇ ಸ್ಥಾನವನ್ನು ಸವಣೂರು ಹಾಗೂ ಮೂರನೇ ಸ್ಥಾನವನ್ನು ರಾಣೆಬೇನ್ನೂರು ಪಡೆದುಕೊಂಡಿದೆ.
ರಾಣೆಬೇನ್ನೂರು ತಾಲೂಕಿನಲ್ಲಿ ಒಟ್ಟು 4637 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಅದರಲ್ಲಿ 3745 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 892 ವಿದ್ಯಾರ್ಥಿಗಳು ಅನುತ್ತಿರ್ಣರಾಗಿದ್ದಉ, ತಾಲೂಕಿನ ಒಟ್ಟಾರೆ ಫಲಿತಾಂಶ ಶೇ.80.78 ರಷ್ಟು ಆಗಿದೆ.
ತಾಲೂಕಿಗೆ ಆಕ್ಸ್‌ಫರ್ಡ್ ವಿದ್ಯಾರ್ಥಿ ಪ್ರಥಮ…
ರಾಣೆಬೇನ್ನೂರು ನಗರದ ಆಕ್ಸ್‌ಫರ್ಡ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಯಾಗಿರುವ ಕಿಶನ್ ಸಾಲ್ವಕರ್ 625 ಕ್ಕೆ 613 ಪಡೆದು ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ.
ಎರಡನೇ ಸ್ಥಾನವನ್ನು ಬಸವರಾಜ ಕೋಲಕಾರ 611 ಅಂಕ ಮೂರನೇ ಸ್ಥಾನವನ್ನು ಚರಣ ಎನ್.ಬಿ. 610 ಅಂಕ ಪಡೆಯುವ ಮೂಲಕ ತಾಲೂಕಿಗೆ ಹೆಸರು ತಂದಿದ್ದಾರೆ ಎಂದು ಬಿಇಓ ಎಂ.ಎಚ್. ಪಾಟೀಲ ತಿಳಿಸಿ ಅಭಿನಂದಿಸಿದ್ದಾರೆ.
More Stories
ಹೆಂಡತಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಗಂಡ ತಡಸ ಗ್ರಾಮದಲ್ಲಿ ಘಟನೆ
ದೇವರಗುಡ್ಡ ಮಾಲತೇಶ ಸ್ವಾಮಿಯ ಆಡಳಿತ ತಹಸೀಲ್ದಾರ್ ಸುಪರ್ದಿಗೆ…
ಸ್ವಚ್ಛ ಕೈಯಿಂದ ಕೆಲಸ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಹೊರಗೆ ಹೋಗಿ; ಲೋಕಾಯುಕ್ತ ಅಧಿಕಾರಿಗಳು.