ರಾಣೆಬೇನ್ನೂರು: ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭವಾದರೆ ಸಾಕು ಕೆಲ ಅಮಾಯಕ ಯುವಕರಿಗೆ ಬೆಟ್ಟಿಂಗ್ ಭೂತ ಮೈಗೆ ಹತ್ತಿ ಬೀಡುತ್ತದೆ.
ಅದರಂತೆ ರಾಣೆಬೇನ್ನೂರು ನಗರದಲ್ಲಿ ಕದ್ದುಮುಚ್ಚಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿದ್ದು ಯುವಕರು ದುಡ್ಡಿನ ಆಸೆಗೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿವೆ.
ನಗರದಲ್ಲಿ ಸಹ ಯಾವುದೇ ಪೋಲಿಸರ ಭಯವಿಲ್ಲದೆ ಕಳೆದ ಒಂದು ತಿಂಗಳಿಂದ ಬೆಟ್ಟಿಂಗ್ ದಂಧೆ ಜೋರಾಗಿ ನಡೆದಿದ್ದು, ಲಕ್ಷಾಂತರ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಆದರೆ ಪೋಲಿಸ್ ಇಲಾಖೆ ಮಾತ್ರ ದಂಧೆ ಮಾಡುವರು ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸದ ಸಂಗತಿ ಜತೆಗೆ ಹಲವು ಅನುಮಾನಕ್ಕೆ ಕಾರಣವಾಗಿದೆ.
ನಗರದ ಕೆಲ ಹಣ ಹೊಂದಿದ್ದ ಯುವಕರು ಗುಂಪೊಂದು ಬೆಟ್ಟಿಂಗ್ ದಂಧೆಗಾಗಿ ವಿವಿಧ ಓಣಿಗಳನ್ನು ಆಯ್ಕೆ ಮಾಡಿಕೊಂಡು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಕಂಡು ಬಂದಿದೆ. RCB ಪಂದ್ಯ ನಡೆದ ಸಮಯದಲ್ಲಿ ನಗರದಲ್ಲಿ ಸುಮಾರು ಒಂದು ಕೋಟಿ ಬೆಟ್ಟಿಂಗ್ ದಂಧೆ ನಡೆಯುತ್ತದೆ ಎಂಬ ಮಾಹಿತಿ ಇದೆ. ಈ ದಂಧೆಯಲ್ಲಿ ಅಮಾಯಕ ಯುವಕರು ಬಲಿಯಾಗುತ್ತಿರುವುದು ಕಂಡು ಬಂದಿದೆ
ಕೂಡಲೇ ಶಹರ ಠಾಣೆ ಪೋಲಿಸರು ನಗರದಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು.
More Stories
ಬಹಳಷ್ಟು ಲಾಭ ಕೊಡುವುದಾಗಿ ನಂಬಿಸಿ 75.42 ಲಕ್ಷ ರೂ. ವಂಚನೆ
ಕಾಕೋಳ ಗ್ರಾಮದಲ್ಲಿ ಸೊಸೈಟಿಗೆ ಕನ್ನ ಹಾಕಿದ ಕಳ್ಳರು.
ಅಧಿಕಾರ ಶಾಶ್ವತವಲ್ಲ, ಜನರ ಸೇವೆ ನಿಜಾವಾದ ಶಾಶ್ವತ ಮಾಜಿ ಶಾಸಕ ಅರುಣಕುಮಾರ ಪೂಜಾರ