ರಾಣೆಬೇನ್ನೂರು: ಮುಸ್ಲಿಂ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾನೆ ಎಂದು ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 11 ಜನ ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿಯ ಶಹರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ ನೇತೃತ್ವದ ತಂಡ ಯಶಸ್ವಿಯಾಗಿದೆ.
ರಾಣೆಬೇನ್ನೂರು ನಗರದ ಮಕ್ಸೂದ್ ಖಲೀಲಅಹ್ಮದ್ ಮೊಮೀನ್ (35), ಸೈಯದ್ಅಹ್ಮದ್ ಸೈಯದಗೌಸಪೀರ ಮಕಾಂದರ (42), ಶಾಯಿದಖಾನ ಖರೀಂಖಾನ ಹೊನ್ನಾಳಿ (28), ಜಾಫರಸಾಧೀಕ ಗುಲ್ಜರಸಾಬ ಕಿಲ್ಲೇದಾರ (40), ಅಬ್ದುಲಮೋನಾಫ್ ಖಲೀಲಅಹ್ಮದ್ ಮೊಮೀನ್ (40), ಅಶ್ಫಕ ಶಂಶುದ್ಧಿನ ಮುಲ್ಲಾ (33), ರಫೀಕ ಶಂಶುದ್ಧಿನ ಮುಲ್ಲಾ (25), ಅಬ್ದುಲಜಾರ ಜಮಾಲವುದ್ದಿನ ಹರಪನಹಳ್ಳಿ (35), ಮೋಹಿದಖಾಜಾ ರಫೀಕ್ ದಾವಣಗೆರೆ (37), ಮದ್ದಶಿರಾ ಮುಸ್ತಾ ಬಂಕಾಪುರ (22), ಅಸ್ಲಾಂಅಹ್ಮದ್ ಮುಸ್ತಾಕ ಅಹ್ಮದ್ ಧರಾನಾ (29) ಸೇರಿ 11 ಜನ ಆರೋಪಿಗಳನ್ನು ಶಹರಠಾಣೆ ಪೊಲೀಸರು ಬಂಧಿಸಿದ್ದಾರೆ.
ಇವರು ಸೆ.20ರಂದು ರಾತ್ರಿ ನಗರದ ವೈದ್ಯ ಡಾ. ಗುರುಮೂರ್ತಿಯ್ಯ ರಾಚೋಟಿಮಠ ಎಂಬುವರು ಮುಸ್ಲಿಂ ಧರ್ಮದ ಹಾಗೂ ಸಮಾಜದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕ್ಲಿನಿಕ್ಗೆ ನುಗ್ಗಿ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಅಲ್ಲದೆ ಕ್ಲಿನಿಕ್ ಮುಂದಿದ್ದ ಬೈಕ್ಅನ್ನು ಎತ್ತಿ ಒಗೆದು ಜಖಂಗೊಳಿಸಿದ್ದರು.
ಈ ಕುರಿತು ವೈದ್ಯ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ, ಎಸ್ಪಿ ಹಾಗೂ ಡಿವೈಎಸ್ಪಿ, ಸಿಪಿಐ ಮಾರ್ಗದರ್ಶನದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಆರೋಪಿಗಳ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
ಕೈ-ಕಮಲ ನಡುವೆ ರಾಜಕೀಯ ಪ್ರತಿಷ್ಠೆ; ನಗರಸಭೆ ಸಾಮಾನ್ಯ ಸಭೆ ಮುಂದೂಡಿಕೆ.
ಹಾನಗಲ್ ತಹಸೀಲ್ದಾರ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.
ಬಿಗರ ಊಟ ಮಾಡಿ ಬರುತ್ತಿದ್ದವರು ಮಸಣಕ್ಕೆ *ನಿಂತಿದ್ದ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಸುಪ್ರೋ ಡಿಕ್ಕಿ* *ಸ್ಥಳದಲ್ಲಿಯೆ ಮೂವರ ದುರ್ಮರಣ, 20ಕ್ಕೂ ಅಧಿಕರಿಗೆ ಗಂಭೀರ ಗಾಯ*